೧. ಬೆದಂಡೆ:
ಬೆದಂಡೆ 'ವೈದಂಡಿಕಾ' ಎಂಬ ಸಂಸ್ಕೃತ ಶಬ್ದದ ತದ್ಬವ ರೂಪ ಬೆದಂಡೆಯನ್ನು ದೇಶಿ ಕಾವ್ಯ ಪದ್ದತಿ ಎಂದು ಗುರುತಿಸಲಾಗಿದೆ. ಒಂದು ಕಂದ ಪದ್ಯವು ಒಂದು ವೃತ್ತವೂ ಇದ್ದು ಜೊತೆಗೆ ಅಂಶಗಣನಿಯತ ದೇಶೀ ಛಂದೋ ರೂಪಗಳಾದ ಅಕ್ಕರ, ಔಷದಿ, ಗೀತಿಕೆ, ತ್ರಿಪದಿಗಳ ಸೇರ್ಪಡೆ ಇರುವುದು ಬೆದಂಡೆ ಎಂದು ಬೆದಂಡೆಯ ಲಕ್ಷಣಗಳನ್ನು ಪರಿಕಲ್ಪಿಸಲಾಗಿದೆ.
*ವೈದಂಡಿಕ ಪದದ ಅರ್ಥ ವೀಣೆಯ ಹಿಮ್ಮೇಳ ಇಲ್ಲದೆ ಹಾಡುವ ಹಾಡು.
೨. ಚೆತ್ತಾಣ:
ಚೆತ್ತಾಣ ವೆಂದರ ಹಲವು ಕಂದಗಳು, ಸುಂದರ ವೃತ್ತ, ಅಕ್ಕರ, ಚೌಪದಿ, ಗೀತಿಕೆ, ತಿವಿದಿ ಇವುಗಳ ಸಮಾವೇಶವಾಗಿದೆ. ಇಲ್ಲಿ ಬೆದಂಡೆಯಂತೆ ಕಂದ ವೃತ್ತಗಳ ಪರ್ಯಾಯವಿರುವುದಿಲ್ಲ. ಬೆದಂಡೆ ಚತ್ತಣ ಮೂಲತಹ ದೇಶೀ ಪದ್ಯ ಜಾತಿಗಳಿಂದ ಕೂಡಿದ ರಚನೆಯಾಗಿದ್ದು , ಅವುಗಳಿಗೆ ಕಂದ ವೃತ್ತಗಳನ್ನು ಬೆರೆಸಿ ಮಾರ್ಗ ಕಾವ್ಯ ಪದ್ದತಿಗೆ ಹೊಂದಿಸುವ ಪ್ರಯತ್ನವನ್ನು ಪಂಡಿತ ಕವಿಗಳು ಮಾಡಿರುವಂತೆಯೂ ತೋರುತ್ತದೆ. ಬೆದಂಡೆಗಿಂತ ಚೆತ್ತಾಣದಲ್ಲಿ ಕಂದಗಳ ಸಂಖೆ ಹೆಚ್ಚಿರುತ್ತದೆ.
*ಚೆತ್ತಾಣವು 'ಚಿತ್ರಾಯಾಣ' ಪದದ ತದ್ಬವ ರೂಪ.
*ಬೆದಂಡೆ - ಚಿತ್ತಾಣಗಳ ಉಲ್ಲೇಖ ಬರುವುದು ಕವಿರಾಜಮಾರ್ಗ ಕಾವ್ಯದಲ್ಲಿ.
*ಕಂದ, ವೃತ್ತ, ಅಕ್ಕರ, ಚೌಪದಿ, ಗೀತಿಕೆ, ತ್ರಿಪದಿ ಹೀಗೆ ಒಟ್ಟು ಆರು ವಿದಗಳಿರುವುದರಿಂದ, 'ಷಟಸ್ಥಾನಕಾರಿ' ಎಂದು ಕರೆಯಲ್ಪಡುವುದೇ ಚೆತ್ತಾಣ.
೩. ಪಗರಣ:
ಪಗರಣ ಇದು ಪ್ರಕರಣದ ತದ್ಭವ ರೂಪ. ಸಂಸ್ಕೃತ ನಾಟಕದ ಹತ್ತು ಪ್ರಕಾರಗಳಲ್ಲಿ ಪ್ರಕರಣ ಒಂದಾಗಿದೆ. ಕಾವಿಕಲ್ಪಿತವಾದ ಲೌಕಿಕ ವೃತ್ತ ಮುಂತಾದ ಲಕ್ಷಣಗಳಿಂದ ಕೂಡಿರುವುದಕ್ಕೆ ಪ್ರಕರಣ ಎನ್ನುತ್ತಾರೆ. ಮೃಚ್ಚಕಟಿಕ, ಮಾಲತಿಮಾಧವ ಇದಕ್ಕೆ ಉದಾಹರಣೆಗಳು. ೪ ಕಾವ್ಯದೋಷಗಳಲ್ಲಿ 'ಶ್ರುತಿಕಷ್ಟ' ಎಂಬ ದೋಷವು ದುಷ್ಕರ ಕಾವ್ಯಗಳಲ್ಲಿ ಅಗರ್ಹಿತಪ್ರಾಯ ಎಂದರೆ ಅನಿಂದ್ಯವಾಗುತ್ತದೆ.
*ಪಗರಣ ಎಂದರೆ ಹಾಸ್ಯ ಪ್ರಧಾನ ನಾಟಕ.
*ಪ್ರಕರಣ ಲಕ್ಷಣದಲ್ಲಿ ಶ್ರುಂಗಾರವು ಪ್ರಧಾನ ರಸವಾಗಿರಬೇಕು. ಹಾಸ್ಯವು ಇದಕ್ಕೆ ಪೋಷಕವಾಗಿ ಬರಬೇಕು.
೪. ಓವನಿಕೆ-ಒನಕೆವಾಡು:
ಇದು ಪಂಪ ಪೂರ್ವ ಯುಗದಲ್ಲಿ ಬಹು ಪ್ರಚಲಿತವಿದ್ದ ಜಾನಪದ ಸಾಹಿತ್ಯ ಪ್ರಕಾರಗಳಾಗಿರಬೇಕು. ಬೀಸುವ, ಕುಟ್ಟುವ, ಪದಗಲೆಂದು ಇವುಗಳನ್ನು ಕರೆಯಲಾಗುತ್ತದೆ. ಹೆಣ್ಣು ಮಕ್ಕಳು, ಹೆಂಗಸರು, ಬಹುತೇಕ ಹಾಡಿಕೊಳ್ಳುತಿದ್ದ ಈ ಹಾಡುಗಳು ಸ್ತ್ರೀ ಸಮುದಾಯದ ರಚನೆಗಳು ಹಾಗಿರಬಹುದು.
*ಒನಕೆ ಇಡಿದು ಭತ್ತ ಕುಟ್ಟುವಾಗ ಹಾಡುವ ಹಾಡುಗಳೆ ಒನಕೆವಾಡು(ಕುಟ್ಟುವ ಹಾಡು).
*ಒನಕೆವಾಡು ವಿನ ವಿವರ ಋಗ್ವೇದದಲ್ಲಿ ಸಿಗುತ್ತದೆ.
೫. ಚಂಪೂ:
ಪ್ರಾಚೀನ ಕನ್ನಡ ಸಾಹಿತ್ಯದ ಅತ್ಯಂತ ಪ್ರಬಲ ಸಾಹಿತ್ಯ ಪ್ರಕಾರಗಳಲ್ಲಿ ಚಂಪೂ ಒಂದು ಸಿಕ್ಕಿರುವ ಚಂಪೂ ಕೃತಿಗಳನ್ನು ಇಟ್ಟುಕೊಂಡು ಹೇಳುವುದಾದರೆ ಪಂಪ ಈ ಪ್ರಕಾರದಲ್ಲಿ ಕೃತಿ ರಚನೆ ಮಾಡಿದ ಆದಿ ಪುರುಷ, ಇವನು ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಚಂಪೂ ರೂಪದ ಅತ್ಯಂತ ಶ್ರೇಷ್ಠ ಕೃತಿಗಳು. ಪಂಪನಿಗಿಂತ ಮೊದಲು ಒಂದನೇ ಗುಣವರ್ಮ ಹರಿವಂಶ, ಶೂದ್ರಕ ಎಂಬ ಎರೆಡು ಕೃತಿಗಳನ್ನು ರಚಿಸಿದರಾದರೂ ಅವು ನಮಗೆ ಲಬ್ಯವಿಲ್ಲ. ಪಂಪನ ನಂತರ ಅನೇಕ ಕವಿಗಳು ಈ ಮಾರ್ಗದಲ್ಲಿ ನಡೆದು ಹಲವು ಶ್ರೇಷ್ಠ ಕೃತಿಗಳನ್ನು ನೀಡಿದ್ದಾರೆ. ಪೊನ್ನ, ರನ್ನ, ಒಂದನೆಯ ನಾಗವರ್ಮ, ಜನ್ನ, ನಾಗಚಂದ್ರ, ಹರಿವಂಶ, ನೇಮಿಚಂದ್ರ, ಅಂಡಯ್ಯ ಷಡಾಕ್ಷರದೇವ ಮುಂತಾದವರು ಚಂಪೂವನ್ನು ಬೆಳೆಸಿ ಕಟ್ಟಿದವರಲ್ಲಿ ಪ್ರಮುಕರು.
*ಗದ್ಯ ಮತ್ತು ಪದ್ಯ ಮಿಶ್ರಿತವಾದ ರೂಪವೇ ಚಂಪೂ.
*ಗದ್ಯ-ಪದ್ಯಗಳ ಮಿಶ್ರಣದಿಂದ ಕೂಡಿದ ಚಂಪೂವಿನಲ್ಲಿ ಹೆಚ್ಚಾಗಿ ಬಳಕೆಯಾಗುವುದು - ಪದ್ಯ.
*ಸು. ೧೦ನೇ ಶತಮಾನದಿಂದ ೧೨ನೇ ಶತಮಾನದ ಮಧ್ಯಭಾಗವನ್ನು ಕನ್ನಡದಲ್ಲಿ ಚಂಪೂ ಸಾಹಿತ್ಯ ಯುಗವೆಂದು ಕರೆಯಲಾಗುತ್ತದೆ.
*ಚಂಪೂವಿನ ಸಮೃದ್ದಿಯ ಕಾಲ ೧೦ ನೇ ಶತಮಾನ.
*ಚಂಪೂವಿನ ಕಾವ್ಯಗಳಲ್ಲಿ ಅತಿಯಾಗಿ ಬಳಕೆಯಾದ ವೃತ್ತ 'ಚಂಪಕ ಮಾಲಾ ವೃತ್ತ'.
*'ಚಂಪೂವಿನ ಮೂಲ' ಎಂಬ ಲೇಖನ ಬರೆದವರು 'ರ0. ಶ್ರೀ. ಮುಗಳಿ'.
*ನಲಚಂಪೂ ಕೃತಿಯ ಕತೃ 'ತ್ರಿವಿಕ್ರಮ'.
*ಯಶಸ್ತಿಲಕ ಕೃತಿಯ ಕತೃ 'ಸೋಮದೇವ.
೬.ಅಷ್ಟಕ:
ಅಷ್ಟಕ ಎಂಬುದು ಎಂಟು ಪದ್ಯಗಳ ರಚನೆ. ಎಂಟು ಪದ್ಯಗಳು ಮಾತ್ರ ಇರುತ್ತವೆ ಎಂದಲ್ಲ. ಎಂಟರಿಂದ ಅನ್ನೆರೆಡರವರೆಗೂ ಪದ್ಯಗಳ ಸಂಖೆ ಮುಂದುವರೆದಿರುವುದರುಂಟು. ಕನ್ನಡದ ಅಷ್ಟಕ ಶತಕಕ್ಕಿಂತ ಪ್ರಾಚೀನವಾದದ್ದು. ಈ ವರೆಗೂ ಲಬ್ಯವಾಗದ ಕ್ರಿ.ಶ. ೮೦೦ ರದ್ದು ಎನ್ನಲಾದ ಸೈಗೊಟ್ಟ ಶಿವಮಾರನ 'ಗಜಾಷ್ಟಕ' ಈ ಅಷ್ಟಕ ಸಾಹಿತ್ಯದಲ್ಲೆಲ್ಲ ಮೊದಲಿನದು.
*ಅಷ್ಟಕ ಸಾಹಿತ್ಯಕ್ಕೆ ಸಂಸ್ಕೃತ ಸಾಹಿತ್ಯವೇ ಪ್ರಭಾವ ಮತ್ತು ಪ್ರೇರಣೆ.
*ಅಷ್ಟಕಗಳ ಪ್ರಧಾನ ವಿಷಯ - ಭಕ್ತಿ ಮತ್ತು ವೈರಾಗ್ಯ .
*ಅಷ್ಟಕಗಳು ಹೆಚ್ಚಾಗಿ ರಚನೆ ಯಾದದ್ದು ವೃತ್ತಗಳಲ್ಲಿ.
೭. ಶತಕ:
'ಶತಕ ಎಂದರೆ ನೂರು ಪದ್ಯಗಳ ರಚನೆ ಎಂದಾದರೂ, ೧೦೧ ರಿಂದ ೧೨೮ ವರೆಗೆ ಪದ್ಯಗಳಿರುತ್ತವೆ. ಶತಕ ಸಾಹಿತ್ಯದ ಆರಂಭ ಸು. ೧೦೭೦ ರಲ್ಲಿ ರಚನೆಯಾದ ನಾಗವರ್ಮಚಾರ್ಯನ 'ಚಂದ್ರ ಚೂಡಾಮಣಿ ಶತಕ' ಕೃತಿಯಿಂದ. ಶತಕಗಳ ರಚನೆಯಲ್ಲಿ ವಿವಿದ ಚಂದೋ ಪ್ರಕಾರಗಳನ್ನು ಬಳಸಿರುವುದನ್ನ ಕಾಣಬಹುದು. ಕಂದ, ವೃತ್ತ, ಷಟ್ಪದಿ, ರಗಳೆ, ಸಾಂಗತ್ಯ ಇತ್ಯಾದಿಗಳನ್ನು ಬಳಸಿರುವುದನ್ನು ಕಾಣಬಹುದು.
*ಭಕ್ತಿ, ಸ್ತುತಿ, ವೈರಾಗ್ಯ, ವೇದಾಂತ, ಮತ ಸಿದ್ದಾಂತ ಪ್ರತಿಪಾದನೆಗಳು ಶತಕ ಸಾಹಿತ್ಯದ ಪ್ರಮುಕ ವಸ್ತು.
*೧೦೦ ಪದ್ಯಗಳ ರಚನೆಯೇ ಶತಕ.
8.ವಚನ:
*ವಚನ ಪದದ ಅರ್ಥ - ಪ್ರಮಾಣ, ಪ್ರಮಾಣಿಕರಿಸಿದ ಮಾತು.
*ವಚನ ಸಾಹಿತ್ಯದ ಉನ್ನತ ಕಾಲ ೧೨ ನೇ ಶತಮಾನ.
*ವಚನ ಸಾಹಿತ್ಯದ ಆದ್ಯವಚನಕಾರ - ದೇವರ ದಾಸೀಮಯ್ಯ.
*ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಾಗಿ ಹುಟ್ಟಿಕೊಂಡ ಸಾಹಿತ್ಯ - ವಚನ ಸಾಹಿತ್ಯ.
*ವಚನ ಸಾಹಿತ್ಯದ ಮೂರು ಹಂತಗಳೆಂದರೆ - ಸೃಷ್ಟಿಕಾಲ, ವಿಕಾಸ ಕಾಲ, ಸಂಕಲನ ಕಾಲ.
*ಒಟ್ಟು ಸಂಪಾದನೆಯಾದ ಶೂನ್ಯ ಸಂಪಾದನೆಗಳ ಸಂಖೆ - ೪.
*ವಚನ ಗಳಲ್ಲಿರುವ ಎರೆಡು ಬಗೆಗಳೆಂದರೆ - ವಚನ ಮತ್ತು ಸ್ವರ ವಚನ.
*ವಚನ ಸಾಹಿತ್ಯದ ಉಗಮದ ಕಾಲ - ಕ್ರಿ. ಶ. ೧೧ನೇ ಶತಮಾನ.
೯. ರಗಳೆ:
*'ರಗಳೆ ಕವಿ' ಎಂದು ಪ್ರಸಿದ್ದವಾದ ಕವಿ - ಹರಿಹರ.
*ರಗಳೆಯನ್ನು ಮೊದಲು ಬಳಸಿದ ಕವಿ - ಪಂಪ.
*ರಗಳೆಯ ಪ್ರಕಾರಗಳೆಂದರೆ - ಉತ್ಸಾಹ, ಮಂದಾನಿಲ, ಲಲಿತಾ.
*ರಗಳೆ ಗಿರುವ ವಿವಿಧ ಹೆಸರುಗಳೆಂದರೆ ಪದ್ದಳಿ, ಪಡ್ಡಳಿ, ಪಜ್ಜಟಿಕೆ, ತೋಮರ, ರಗಳೆ, ಮಟ್ಟರಗಳೆ, ಕಡವಕ, ತ್ವರಿತರಗಳೆ.
*ಹರಿಹರ ಅತಿ ಹೆಚ್ಚು ಬಳಸಿದ ರಗಳೆಯ ಪ್ರಕಾರ - ಲಲಿತ.
೧೦.ಷಟ್ಪದಿ:
ಷಟ್ಪದಿ ಒಂದು ದೇಶಿ ಛಂದಸ್ಸು, ಮದ್ಯಕಾಲೀನ ಕನ್ನಡ ಸಾಹಿತ್ಯ ಸಂದರ್ಬದಲ್ಲಿ ತುಂಬಾ ಪ್ರಚಾರಗೊಂಡ ಕಾವ್ಯ ರೂಪ. ಶಾಸನಗಳಲ್ಲಿ ಹಾಗೂ ಚಂಪೂ ಕಾವ್ಯಗಳಲ್ಲಿ ತೀರಾ ವಿರಳವಾಗಿ ಬಳಕೆಯಾಗಿರುವ ಈ ಚಂದೊರೂಪ ಮದ್ಯ ಕಾಲೀನದಲ್ಲಿ ಬಹುತೇಕ ರಾಘವಾಂಕನಿಂದ ಪೂರ್ಣ ಕಾವ್ಯದ ಛಂದಸ್ಸಾಗಿ ಬಳಕೆಗೊಂಡ ಕಾವ್ಯರೂಪವಾಗಿ ಮೆರೆದಿದೆ.
*ರಾಘವಾಂಕನನ್ನು 'ಷಟ್ಪದಿಯ ಬ್ರಹ್ಮ' ಎಂದು ಕರೆಯಲಾಗುತ್ತದೆ.
*೧೪ನೇ ಶತಮಾನದಿಂದ ೧೭ ನೇ ಶತಮಾನದವರೆಗೆ ಷಟ್ಪದಿ ಯುಗ ಎಂದು ಕರೆಯಲಾಗುತ್ತದೆ.
*ಉದ್ದಂಡ ಷಟ್ಪದಿಯನ್ನು ಮೊದಲು ಪ್ರಯೋಗಿಸಿದವರು ರಾಘವಂಕಾ - 'ವೀರೇಶ ಚರಿತೆ' ಕೃತಿಯಲ್ಲಿ.
*ಪ್ರಾರಂಬದಲ್ಲಿ ಷಟ್ಪದಿಯು ಅಂಶಗಣದ ಚಂದಸ್ಸಾಗಿತ್ತು.
*ಭಾಮಿನಿ ಷಟ್ಪದಿಯಲ್ಲಿ ರಚನೆಯಾದ ಮೊದಲ ಕಾವ್ಯ 'ಬಸವಪುರಾಣ'.
೧೧.ತ್ರಿಪದಿ:
*ತ್ರಿಪದಿಯು ಮೊದಲು ಉಲ್ಲೇಕ ಕಾಣುವುದು ಬಾದಾಮಿ ಶಾಸನದಲ್ಲಿ(ಕಪ್ಪೆ ಅರಭಟ್ಟಣ ಶಾಸನ).
*ತ್ರಿಪದಿಯ ಲಕ್ಷಣವನ್ನು ಮೊದಲ ಬಾರಿಗೆ ಹೇಳಿದವರು ೧ನೇ ನಗವರ್ಮ.
*ತ್ರಿಪದಿಗಿರುವ ಇತರ ಹೆಸರುಗಳೆಂದರೆ - ತಿವದಿ, ತ್ರಿವಿದಿ, ತಿವದಿಗೆ, ತ್ರಿಪದಿಕಾ, ತಿವುಡೆ, ತ್ರಿಪುಡೆ.
*ತಿರುಮಲಾರ್ಯನು ತ್ರಿಪದಿಯನ್ನು 'ಮಕ್ಕಾಲ್ವಾಡು' ಹೆಸರಿನಿಂದ ಕರೆದಿದ್ದಾನೆ.
*ತ್ರಿಪದಿಯಲ್ಲಿ ರಚಿಸಿದ ಜಯದೇವಿ ತಾಯಿ ಲಿಗಾಡೆಯವರ ಕೃತಿ - ಶ್ರೀ ಸಿದ್ದರಮೇಶ್ವರ ಪುರಾಣ.
*ಗ್ರಾಂಥಿಕ ಸಾಹಿತ್ಯದಲ್ಲಿ ಮೊತ್ತಮೊದಲಿಗೆ ತ್ರಿಪದಿಯ ರಚನೆ ಕಾಣಿಸುವುದು 'ಆದಿಪುರಾಣಾ' ಕಾವ್ಯದಲ್ಲಿ.
*ಕವಿರಾಜಮಾರ್ಗದಲ್ಲಿ ತ್ರಿಪದಿ ಯನ್ನು ತಿವದಿ ಎಂಬ ಹೆಸರಿನಿಂದ ಕರೆಯಲಾಗಿದೆ.
೧೨.ಸಾಂಗತ್ಯ:
*ಸಾಂಗತ್ಯದಲ್ಲಿ ರಚನೆಯಾದ ಮೊದಲ ಕೃತಿ - ದೇಪರಾಜನ 'ಸೊಬಗಿನ ಸೋನೆ'.
*ಮೊದಲ ಸಾಂಗತ್ಯ ಚಾರಿತ್ರಿಕ ಕಾವ್ಯ - ರಾಮನಾಥ ಚರಿತೆ ಅಥವಾ ಕುಮಾರ ರಾಮನ ಸಾಂಗತ್ಯ.
*ಸಾಂಗತ್ಯ ಎಂಬುದು 'ಸಂಗತಿ' ಎಂಬ ಪದದಿಂದ ಬಂದಿದೆ.
*ಸಾಂಗತ್ಯದಲ್ಲಿ ಬರೆದ ಕಲ್ಯಾಣ ಕೀರ್ತಿಯ ಕೃತಿ - 'ಕಾಮನ ಕಥೆ'.
*ಸಾಂಗತ್ಯ ಸಾಂಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದ ಕವಿ - 'ರತ್ನಾಕರವರ್ಣಿ.
೧೩.ಕೀರ್ತನೆ:
*ಕೀರ್ತನೆಗಳನ್ನು ರಚಿಸಿದ ಪಂಥ - ಹರಿದಾಸ ಪಂಥ.
*ಮೊದಲ ಕೀರ್ತನಕಾರರು - ನರಹರಿ ತೀರ್ಥ.
*ಪಲ್ಲವಿ, ಅನುಪಲ್ಲವಿ, ಚರಣದಿಂದ ಕೂಡಿದ ಹಾಡು- ಕೀರ್ತನೆ.
*ಕೀರ್ತನೆಯ ಕೊನೆಯಲ್ಲಿರುವುದು - ಕೀರ್ತನಕಾರರ ಅಂಕಿತ.
*ನರಹರಿ ತೀರ್ಥರ ಉಪಲಬ್ದವಾದ ಕೀರ್ತನೆಗಳ ಸಂಖೆ ಎರೆಡು.
೧೪. ಕಂದ-ವೃತ್ತ:
*ಚಂಪೂವಿನಲ್ಲಿಯ ಗದ್ಯಭಾಗವನ್ನು ಹೊರತುಪಡಿಸಿ ಉಳಿಯುವ ಭಾಗವೇ - ಕಂದ ವೃತ್ತ.
*ಕಂದ-ವೃತ್ತ ಗಳಲ್ಲಿ ರಚನೆಯಾದ ಪ್ರಮುಖ ೪ ಕೃತಿಗಳೆಂದರೆ - ಕವಿರಾಜಮಾರ್ಗ(ಶ್ರೀ ವಿಜಯ), ಚಾವುಂಡರಾಯನ ಲೋಕೋಪಕಾರ, ಬ್ರಹ್ಮ ಶಿವನ ಸಮಯ ಪರೀಕ್ಷೆ, ಜನ್ನನ ಯಶೋದರ ಚರಿತೆ.
No comments:
Post a Comment