ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು:
೧. ಶಕ್ತಿ ಯೋಜನೆ:
* ರಾಜ್ಯ ಸರ್ಕಾರದ ಸ್ವಾಮ್ಯದ ಅಡಿಯಲ್ಲಿ ಬರುವ ಎಲ್ಲ ನಾಲ್ಕು ಸಾರಿಗೆ ನಿಗಮಗಳ ಬಸ್ಗಳಲ್ಲಿ ಚಲಾವಣೆಗೆ ತರಲಾಗಿದೆ.
* ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಸೌಲಬ್ಯ ಇದಾಗಿದೆ.
*ಪ್ರತಿ ದಿನ ಸರಾಸರಿ ೫೦ ರಿಂದ ೬೦ ಲಕ್ಷ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ.
*ವಾರ್ಷಿಕ ೪೦೦೦ ಕೋಟಿ ರೂ. ಈ ಯೋಜನೆಗೆ ಮೀಸಲಿದಲಾಗಿದೆ.
*ಜೂನ್ ೧೧ ರಿಂದ ಮುಖ್ಯ ಮಂತ್ರಿಗಳು ಬೆಂಗಳೂರಿನ ವಿಧಾನ ಸೌಧದ ಮುಂಬಾಗ ಚಾಲನೆ ನೀಡಿದರು.
*ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಚಾಲನೆ ನೀಡಲಾಯಿತು.
*ಇದು ವಿಶೇಷ ವಾಹನಗಳಿಗೆ ಮತ್ತು ಅಂತರ್ ರಾಜ್ಯ ಪ್ರಯಾಣಕ್ಕೆ ಅನ್ವ ಹಿಸುವುದಿಲ್ಲ.
*೦ ಟಿಕೆಟ್ ಗಳಲ್ಲಿ ವಿತರಿಸಲಾಗುತ್ತದೆ.
*ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ.
೨.ಗೃಹ ಜ್ಯೋತಿ:
*ಗೃಹ ಜ್ಯೋತಿಯಡಿ ೨೦೦ ಯೂನಿಟ್ ವರೆಗಿನ ಗೃಹ ಬಳಕೆಗೆ ವಿದ್ಯುತ್ ಉಚಿತ.
*೨ ಕೋಟಿಗೂ ಹೆಚ್ಚು ಗ್ರಾಹಕರಿಗೆ ಅನುಕೂಲ.
*ವಾರ್ಷಿಕ 13910 ಕೋಟಿ.
*ಮುಖ್ಯ ಮಂತ್ರಿಗಳು ಆಗುಸ್ಟ್ 5 2023 ರಂದು ಕಲಬುರ್ಗಿಯಲ್ಲಿ ಚಾಲನೆ ನೀಡಿದರು.
*2022-2023ರ ವರ್ಷದ ಮಾಸಿಕ ಸರಾಸರಿ ಬಳಕೆಯ ಶೇ.10 ರಷ್ಟು ಅಥವಾ ಗರಿಷ್ಠ 200 ಯೂನಿಟ್ ವರೆಗೆ ಉಚಿತ.
*ಸರ್ಕಾರವು ಸಹಾಯಧನವನ್ನು ವಿದ್ಯುತ್ ಪೂರೈಕೆ ಕಂಪನಿಗಳಿಗೆ ಪಾವತಿಸುತ್ತದೆ.
*ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳು ಇದರೊಂದಿಗೆ ವಿಲೀನವಾಗಿದೆ.
೩.ಗೃಹಲಕ್ಷ್ಮಿ:
*ಕುಟುಂಬದ ಯಜಮಾನಿಗೆ ಮಾಸಿಕ ೨೦೦೦ ರೂ. ನೆರವು ನೀಡುವುದು.
*ನೇರವಾಗಿ ಕಾತೆಗೆ ವರ್ಗಾವಣೆ ಮಾಡಲಾಗುತ್ತದೆ.
*ಇದರ ವೆಚ್ಚ 30000 ಕೋಟಿ .
*ಆಗುಸ್ಟ್- 30- 2023 ರಿಂದ ಜಾರಿಯಲ್ಲಿದೆ.
*ಮೈಸೂರೀನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ.
*ಕಾಂಗ್ರೆಸ್ಸ್ ನಾಯಕ ರಾಹುಲ್ ಗಾಂಧಿ ಅವರು ಚಾಲನೆ ಮಾಡಿದ್ದರೆ.
೪.ಅನ್ನ ಭಾಗ್ಯ:
*ಎಲ್ಲ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ. ಹೆಚ್ಚುವರಿ ಆಹಾರಧಾನ್ಯ ವಿತರಣೆ.
*ಆಹಾರಧಾನ್ಯ ಲಭ್ಯವಾಗುವವರೆಗೂ ಪ್ರತಿ ಫಲಾನುಭವಿಗೆ 170 ರೂ. ನೊಂತೆ ನೇರ ನಗದು ವರ್ಗಾವಣೆ ಮಾಡಲಾಗಿದೆ.
*ವಾರ್ಷಿಕ 10000 ಕೋಟಿ ರೂ. ವೆಚ್ಯ.
೫.ಯುವ ನೀಧಿ:
*2022- 2023 ನೇ ಸಾಲಿನಲ್ಲಿ ಉತ್ತೀರ್ಣರಾಗಿ ಕನಿಷ್ಠ 180 ದಿನಗಳಾದ ನಂತರ, ಉದ್ಯೋಗ ದೊರೆಯದ ನಿರುದ್ಯೋಗಿ ಪದವಿದರರಿಗೆ ಮಾಸಿಕ 3000 ರೂ.
*ಡಿಪ್ಲೋಮಾ ಪಡೆದವರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
೬.ಕೃಷಿ ಮತ್ತು ಪೂರಕ ಚಟುವಟಿಕೆಗಳು:
*ಕೃಷಿ ಭಾಗ್ಯ ಯೋಜನೆ 110 ಕೋಟಿ ವ್ಯಚ್ಚದಲ್ಲಿ ಮರುಜಾರಿ.
*ಹಿಂದುಳಿದ ತಾಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ತಲಾ 20 ಲಕ್ಷ ವರೆಗಿನ ಸಾಲಕ್ಕೆ ಶೇ.4 ರ ಬಡ್ಡಿ ಸಹಾಯದಾನ ನೀಡಲಾಗಿದೆ.
*ರೈತ ಉತ್ಪಾದಕ ಸಂಸ್ಥೆಗಳು ಮೂಲಸೌಕರ್ಯ ಸೃಜನೆಗೆ ಗರಿಷ್ಠ ಶೇ.20 ರಷ್ಟು, 1 ಕೋಟಿ ರೂ. ಮೀರದಂತೆ seed capital ಸೌಲಭ್ಯ ನೀಡಲಾಗಿದೆ.
*ಕೃಷಿ ಯಂತ್ರದಾರೆ ಕೇಂದ್ರಗಳನ್ನು ಬಳಪಡಿಸಲು 100 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ತಾಪನೆಗೆ - 50 ಕೋಟಿ.
*ಜಿ ಐ ಟ್ಯಾಗ್ ಹೊಂದಿದ ಕಾಫೀ, ಮೈಸೂರ್ ವೀಳ್ಯದೆಲೆ, ನಜನಗೂಡು ರಸಬಾಳೆ, ಮೈಸೂರ್ ಮಲ್ಲಿಗ ಳ ಉತ್ಪಾದನೆ, ಸಂಶೋದನೇ, ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಮಾಡುವುದು.
*ಶಿದ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆಯಾಗಿ ಅಭಿ ವೃದ್ದಿ ಮಾಡುವುದು.
*ಜಾನುವಾರಗಳ ಆಕಸ್ಮಿಕ ಸಾವಿನ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ಮರು ಜಾರಿ.
*ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿ 50,000ರೂ ಗಳಿಂದ 3 ಲಕ್ಷ ರೂ. ಗಳಿಗೆ ಹೆಚ್ಚಳ.
೭. ಸಾಲಾ ಸೌಲಭ್ಯ:
*ಶೂನ್ಯ ಬಡ್ಡಿ ದರದಲ್ಲಿ ನೀಡುವ ಅಲ್ಪಾವದಿ ಸಾಲದ ಮಿತಿ ೫ ಲಕ್ಷ ರೂ. ಗಳಿಗೆ ಹೆಚ್ಚಳ.
*ಶೇ.3 ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲದ ಮಿತಿ 10 ಲಕ್ಷ ರೂ. ಗಳಿಂದ 15 ಲಕ್ಷ ರೂ. ಗಳಿಗೆ ಹೆಚ್ಚಳ.
*30 ಲಕ್ಷಕ್ಕೊ ಹೆಚ್ಚು ರೈತರಿಗೆ 25000 ಕೋಟಿ ರೂ. ಸಾಲ ಗೋದಾಮು ನಿರ್ಮಿಸಲು 20 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.7 ರಷ್ಟು ಬಡ್ಡಿ ಸಹಾಯಧನ.
*ಎಪಿಎಂಸಿ ಕಾಯ್ದೆ ತಿದ್ದುಪಾಡು ಹಿ0ಪಡೆಯಲು ಕ್ರಮ.
*ರಾಜ್ಯದ ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ ಮಿನಿ ಶೀತಲ ಗೃಹಗಳ ಸ್ಥಾಪನೆ.
೮.ನೀರವರಿಗೆ ಉತ್ತೇಜನೆ:
*ಪ್ರಗತಿಯಲ್ಲಿರುವ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ.
*ಕೆ.ಸಿ. ವ್ಯಾಲಿ ಮತ್ತು ಹೆಚ್. ಎನ್. ವ್ಯಾಲಿ ಯೋಜನೆಗಳ ಎರಡನೇ ಹಂತದಲ್ಲಿ 529 ಕೋಟಿ ರೂ. ವೆಚ್ಚದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 296 ಕೆರೆ ತುಂಬಿಸುವ ಯೋಜನೆ ಅನುಷ್ಠಾನ ಗೊಳಿಸಲಾಗಿದೆ.
೯.ಶಿಕ್ಷಣ:
*ಪಠ್ಯಪುಸ್ತಕ ಮರುಪರಿಷ್ಕರಣೆಗೆ ಕ್ರಮ.
*೧ ರಿಂದ ೧೦ ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ಪೂರಕ ಪೌಷ್ಠಿಕ ಆಹಾರ .
*'ಮರುಸಿಂಚನ ತರಬೇತಿ': ಕಲಿಕೆಯಲ್ಲಿ ಹಿಂದುಳಿದ 13 ಲಕ್ಷ ಶಾಲಾ ವಿದ್ಯಾರ್ಥಿಗಳ ಕಾಳಕಾ ಬಲವರ್ಧನೆಗೆ 80 ಕೋಟಿ ರೂ ವ್ಯಚ್ಚದ 1.5 ಲಕ್ಷ ವಿದ್ಯಾರ್ಥಿಗಳನ್ನು ಪ್ರೌಡ ಹಂತದ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಹೊಸ ಶಿಕ್ಷಣ ನೀತಿ ರೂಪಿಸಲು ಕ್ರಮ.
*ವೃತ್ತಿ ಚೈತನ್ಯ ಯೋಜನೆಯಡಿಯಲ್ಲಿ 10 ಕೋಟಿ ರೂ. ವ್ಯಚ್ಚದಲ್ಲಿ ಇಲಾಖೆ ಯ 8000 ಸಿಬ್ಬಂದಿಗೆ ತರಬೇತಿ.
*ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಶೇ.40 ಸೀಟುಗಳಿಗೆ ಪಿ.ಹೆಚ್ .ಡಿ ಅದ್ಯಾಯ ನಕ್ಕೆ ಕೌನ್ಸೆಲಿಂಗ್.
೧೦.ಆರೂಗ್ಯ:
*ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ.
*ಮೈಸೂರು, ಕಲಬುರ್ಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪ್ತ್ರೆಗಳನ್ನು ಕಾರ್ಯರಂಭ.
*ಮೈಸೂರು ಮತ್ತು ಕಲಬುರ್ಗಿಯಲ್ಲಿ ಟ್ರಾಮಾ ಕೇರ್ ಸೆಂಟರ್ ಗಳ ಕಾರ್ಯಾಚರಣೆಗೆ 30 ಕೋಟಿ ರೂ.
ಅನುದಾನ.
೧೧. ಮಹಿಳಾ ಸಬಲೀಕರಣ:
* ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಮಹಿಳಾ ಉದ್ಯಮಿಗಳಿಗೆ ಶೇ.4 ರ ಬಡ್ಡಿ ದರದಂತೆ ನೀಡಲಾಗುವ ಸಾಲದ ಮಿತಿ 5 ಕೋಟಿ ರೂಗಳಿಗೆ ಹೆಚ್ಚಳ.
*ಆಸಿಡ್ ದಾಳಿ : ಸಂತ್ರಸ್ತ ಮಹಿಳೆಯರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಮೂಲಕ 5 ಲಕ್ಷ ರೂ. ಗಳವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಮತ್ತು ರಾಜೀವ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯ.
*ಹಿಂದುಳಿದ ವರ್ಗದ ವಿದ್ಯಾರ್ಥಿಗಳ 'ಅರಿವು' ಸಾಲ ಯೋಜನೆ, ವಿದ್ಯಾಸಿರಿ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಯೋಜನೆ, ವಿದೇಶಿ - ವ್ಯಾಸಂಗಕ್ಕೆ ಶೂನ್ಯ ಬಡ್ಡಿದರದಲ್ಲಿ 20 ಲಕ್ಷ ರೂ ವರೆಗೆ ಸಾಲ ಯೋಜನೆ ಹಾಗೂ ಶುಚಿ ಸಂಭ್ರಮ ಕಿಟ್ ವಿತರಣೆ ಯೋಜನೆಗಳ ಪುನರಾರಂಭಕ್ಕೆ ಕ್ರಮ.
*ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ಕೈಗೊಳ್ಳಲು 2 ಕೋಟಿ.
*ಹಿಂದುಳಿದ ವರ್ಗಗಳ ಪ್ರವರ್ಗ -1 ಮತ್ತು ಪ್ರವರ್ಗ - 2ಎ ಸಮುದಾಯಗಳು ಉದ್ಯಮಿಗಳಿಗೆ ಸೇವ ವಲಯದ ಉದ್ಯಮ ಚಟುವಟಿಕೆಗಳಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ 10 ಕೋಟಿ ರೂ. ವರೆಗಿನ ಸಾಲಕ್ಕೆ ಶೇ.6 ರಷ್ಟು ಬಡ್ಡಿ ಸಹಾಯಧನ.
*ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನಗಳನ್ನು ಖರೀದಿಸಲು ಸಹಾಯಧನ ಸೌಲಭ್ಯ.
*ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಗೆ 75 ಕೋಟಿ ಅನುದಾನ.
*ಬೆಂಗಳೂರಿನ ಹಜ್ ಭವನದಲ್ಲಿ ಅಲ್ಪಸಂಖ್ಯಾತರ ಯುವ ಜನರಿಗೆ 10 ತಿಂಗಳ ವಸತಿ ಸಹಿತ ಐಏಎಸ್ /ಕೆಏಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಪ್ರಾರಂಭಿಸಲು ಕ್ರಮ.
*ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ದಿ ನಿಗಮ ಸ್ಥಾಪನೆಗೆ ಕ್ರಮ 100 ಕೋಟಿ ರೂ. ಅನುದಾನ.
*ಅಸಂಘಟಿತ ವಲಯಗಳಲ್ಲಿ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ/ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 4 ಲಕ್ಷ ರೂ. ಗಳ ಜೀವವಿಮೆ ಹಾಗೂ ಅಪಘಾತ ವಿಮಾ ಸೌಲಭ್ಯ.
*ಜಾಲ ಜೀವನ್ ಮಿಷನ್ ಯೋಜನೆಯಡಿ ಸುಸ್ಥಿರ ಜಲಮೂಲ ಆಧಾರಿಸಿ 118 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಮೂಲಕ 25 ಲಕ್ಷ ಮನೆಗಳಿಗೆ ನಳಸಂಪರ್ಕ ಒದಗಿಸುವ ಗುರಿ.
*ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ಹೊಸ ಸೇವೆಗಳೊಂದಿಗೆ 'ಅರಿವು ಕೇಂದ್ರ' ಗಳಾಗಿ ಮೇಲ್ದರ್ಜೆಗೇರಿಸಿ ವಾರಾಂತ್ಯದಲ್ಲಿಯೂ ತೆರೆಯಲು ಕ್ರಮ.
*4000 ಗ್ರಾಮ ಪಂಚಾಯತಿಗಳಲ್ಲಿ 'ಕೂಸಿನ ಮನೆ' ಎಂಬ ಹೆಸರಿನಲ್ಲಿ ಶಿಶುಪಾಲನಾ ಕೇಂದ್ರಗಳು ಪ್ರಾರಂಭ.
*ಒಣ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ 27 ಜಿಲ್ಲೆಗಳಲ್ಲಿ Material Recovery Facility ನಿರ್ಮಾಣಕ್ಕೆ 22 ಕೋಟಿ.
*ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ದಿಗೆ 5000 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ.
*ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಅಭಿವೃದ್ದಿಯ ಬಹು ಆಯಾಮ ಸೂಚ್ಯಂಕಗಳ ಸುಧಾರಣೆಗೆ 3000 ಕೋಟಿ ರೂ.
*ರಾಜ್ಯದಲ್ಲಿ ವಾಯು ಯಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡಲು ಸಮಗ್ರ ನಾಗರಿಕ ವಿಮಾನಯಾನ ನೀತಿ.
*ಬಂದರು ಅವಲಂಬಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಉತ್ತರ ಕನ್ನಡ ಜಿಲ್ಲೆಯ ಕೇನಿಯಲ್ಲಿಸರ್ವ ಋತು ಡೀಪ್ ವಾಟರ್ ಗ್ರೀನ್ ಫೀಲ್ಡ್ ಬಂದರು ಅಭಿವೃದ್ದಿ.
*ಉದ್ಯಮಗಳ ಸ್ಥಾಪನೆಗೆ ಒಂದೇ ಪೋರ್ಟಲ್ ನಲ್ಲಿ ಎಲ್ಲ ಪರವಾನಗಿ ನೀಡಲು ಅತ್ಯಾದುನಿಕ ಏಕಾಗವಾಕ್ಷಿ ವ್ಯವಸ್ಥೆ ಜಾರಿ.
*ಕೆ.ಜಿ.ಎಫ್ ನಲ್ಲಿ ಬೃಹತ್ ಕೈಗಾರಿಕಾ ಟೌನ್ ಷಿಪ್ ಜಾರಿ.
*ವಿಜಯಪುರ ಜಿಲ್ಲೆಯಲ್ಲಿ ಉತ್ಪಾದನಾ ಕ್ಲಸ್ಟರ್ ಮತ್ತು ದಕ್ಷಿಣ ಕನ್ನಡದಲ್ಲಿ ರಫ್ತು ಆಧಾರಿತ ಕೈಗಾರಿಕೆಗಳ ಕ್ಲಸ್ಟರ್ ಅಭಿವೃದ್ದಿಗ ಕ್ರಮ.
*ಕೈಗಾರಿಕೆಗಳ ಸ್ತಾಪನೆಗೆ ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಪರಿವರ್ತಿಸದೆ ಬಳಸಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ.
*ಬೆಂಗಳೂರಿನ ದೇವನಹಳ್ಳಿ ಏರೋಸ್ಪೇಸ್ ಮತ್ತು ಡಿಫೆನ್ಸ ಪಾರ್ಕ್ ನಲ್ಲಿ ಅತ್ಯಾಧುನಿಕ ಕರ್ನಾಟಕ ಏರೋಸ್ಪೇಸ್ ತಂತ್ರಜ್ಞಾನ ಕೇಂದ್ರ ಸ್ಥಾಪನೆ.
*ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ವತಿಯಿಂದ ಹೊಸದಾಗಿ 7 ಕೈಗಾರಿಕಾ ವಸಾಹತುಗಳ ಸ್ಥಾಪನೆ.
*ಮಂಡ್ಯದ ಮೈಸೂರ್ ಷುಗರ್ ಕಂಪನಿ ಯ ಪುನರುಜ್ಜೀವನಗೊಳಿಸಲು 50 ಕೋಟಿ ರೂ.ಬಂಡವಾಳ.
*ಒಲಂಪಿಕ್ ಹಾಗೂ ಪ್ಯಾರಾ ಒಲಂಪಿಕ್ ವಿಜೇತರಿಗೆ ಗ್ರೂಪ್ ಎ ಮತ್ತು ಏಶಿಯನ್ ಹಾಗೂ ಕಾಮನ್ ವೆಲ್ತ್ ಕ್ರೀಡಾ ವಿಜೇತರಿಗೆ ಗ್ರೂಪ್ ಬಿ ಉದ್ದೆಗಳಿಗೆ ನೇಮಕ.
*ಕ್ರೀಡಾಪಟುಗಳಿಗೆ ಪೋಲೀಸ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಶೇ.3 ರಷ್ಟು ಉದ್ದೇಗಳನ್ನು ಮೀಸಲಾತಿ.
*ಬೀದರ್ ನಲ್ಲಿ ಹೆಚ್ಚಾಗಿ ಕಂಡುಬರುವ ಕೃಷ್ಣ ಮೃಗಗಳ ಸಂರಕ್ಷಣಾ ಮೀಸಲು ಪ್ರದೇಶ ವನ್ನಾಗಿ ಗೋಷಣೆ.
*ಬಯಲು ಸೀಮೆಯ 17 ಜಿಲ್ಲೆಗಳಲ್ಲಿ 5 ವರ್ಷಗಳಲ್ಲಿ 500 ಕೋಟಿ ರೂ. ವ್ಯಚ್ಚದಲ್ಲಿ ಹಸಿರೀಕರಣ ಕಾರ್ಯಕ್ರಮ.
*ವಿವಾಹ ನೋಂದಣಿ ಪ್ರಕ್ರಿಯೆ ಸುಗಮಗೊಳಿಸಲು ಆನ್ಲೈನ್ ನಲ್ಲಿ ಮುಂಗಡ ಸಮಯ ನಿಗದಿ.
*ಮೈಸೂರು ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣ.
*ನುರಿತ ಶಿಲ್ಪಿಗಳನ್ನು ತಯಾರಿಸಲು ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಪ್ರಾರಂಭ.
No comments:
Post a Comment